ಶಿವಮೊಗ್ಗ ಮಹಾನಗರಪಾಲಿಕೆ, ಶಿವಮೊಗ್ಗ

   ಶಿವಮೊಗ್ಗ ನಗರ ಆಶ್ರಯ ಸಮಿತಿ

   ಶಿವಮೊಗ್ಗ ನಗರ ಕಾರ್ಖಾನೆ ಕಾರ್ಮಿಕರಿಗೆ ಆಶ್ರಯ ವಿಶೇಷ ವಸತಿ ಯೋಜನೆಯಡಿಯಲ್ಲಿ ಜಿ+2 ಮಾದರಿ ಮನೆಗಳಿಗೆ ಅರ್ಜಿಯನ್ನು ಭರ್ತಿಮಾಡಲು ಸೂಚನೆಗಳು :-

ಅರ್ಜಿಗಳನ್ನು ಆನ್-ಲೈನ್ (Online) ಮೂಲಕ ಸಲ್ಲಿಸಲು ಪ್ರಾರಂಭ ದಿನಾಂಕ:

05-09-2019

ಅರ್ಜಿಗಳನ್ನು ಆನ್-ಲೈನ್ (Online) ಮೂಲಕ ಸಲ್ಲಿಸಲು ಕೊನೆಯ ದಿನಾಂಕ:

31-10-2019

ಬ್ಯಾಂಕ್ ಮೂಲಕ ನಿಗಧಿತ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ:

08-11-2019

 

ಅರ್ಜಿದಾರರು ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮುಂಚಿತವಾಗಿ ಅಧಿಸೂಚನೆ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಓದಿಕೊಳ್ಳತಕ್ಕದ್ದು

  •   ಅರ್ಜಿ ಶುಲ್ಕ -

ಜಾತಿ

ಅರ್ಜಿ ಶುಲ್ಕ .ಎಂ.ಡಿ   ಒಟ್ಟು
ಸಾಮಾನ್ಯ, ಪ್ರವರ್ಗ-1, ಪ್ರವರ್ಗ 2(), 2(ಬಿ), 3(), 3(ಬಿ)ಗೆ ಸೇರಿದ ಅರ್ಜಿದಾರರಿಗೆ ರೂ. 500/- ರೂ. 10,000/- ರೂ. 10,500/-
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರಿಗೆ ರೂ. 350/- ರೂ.10,000/- ರೂ. 10,350/-

 

ಅರ್ಜಿದಾರರು ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕಂಪ್ಯೂಟರ್ ಜನರೇಟೆಡ್ ಚಲನ್ ನೊಂದಿಗೆ ಅಧಿಸೂಚನೆಯಲ್ಲಿ ಸೂಚಿಸಿರುವ ಬ್ಯಾಂಕ್ ಗಳಲ್ಲಿ (ಭಾನುವಾರ, ಸರ್ಕಾರಿ ರಜೆ ಹಾಗೂ ಬ್ಯಾಂಕಿನ ರಜೆಯನ್ನು ಹೊರತುಪಡಿಸಿ) ನಗದನ್ನು ಪಾವತಿಸಿ ಸ್ವೀಕೃತಿ/ರಶೀದಿಯನ್ನು ಹಣ ಪಾವತಿಸಿದ ಬ್ಯಾಂಕ್ ಗಳಲ್ಲಿ ಪಡೆದ ನಂತರವಷ್ಟೆ ತಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವುದು.

 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

ಅರ್ಜಿದಾರರು ಹೊಂದಿರಬೇಕಾದ  ದಾಖಲೆಗಳು

1. 18 ವರ್ಷ ಮೇಲ್ಪಟ್ಟ ಕಾರ್ಖಾನೆ ನೌಕರರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

2. ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿರಬೇಕು,

3. ಅರ್ಜಿದಾರರು ಪಡಿತರ ಚೀಟಿಯನ್ನು ಹೊಂದಿರಬೇಕು.

4.   ಅರ್ಜಿದಾರರು ಮತ್ತು ಅವರ ಕುಟುಂಬದವರು ಸ್ವಂತ ನಿವೇಶನ/ಮನೆಯನ್ನು ಹೊಂದಿರಬಾರದು.

5.   ಹಕ್ಕುಪತ್ರವನ್ನು ಮಹಿಳಾ ಫಲಾನುಭವಿಯ ಹೆಸರಿನಲ್ಲಿಯೇ ಸಲ್ಲಿಸುವುದು.

6. ಅರ್ಜಿದಾರರು ಪುರುಷ ಅಭ್ಯರ್ಥಿಯಾಗಿದ್ದಲ್ಲಿ, ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರೀಕ ಅಭ್ಯರ್ಥಿಯಾಗಿರಬೇಕು. Criteria for Male Candidate

7. ಅರ್ಜಿದಾರರು ಬೇರೆ ಯಾವುದೇ ಯೋಜನೆಯಡಿಯಲ್ಲಿ ನಿವೇಶನ/ವಸತಿ ಸೌಲಭ್ಯವನ್ನು ಪಡೆದಿರಬಾರದು ಹಾಗೂ ಈ ಹಿಂದೆ ಯಾವುದಾದದರು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ವಿವರವನ್ನು ನೀಡುವುದು.

1.    ಅರ್ಜಿದಾರರ ಇತ್ತೀಚಿನ 01 ಕಲರ್ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ.

2.   ಆಧಾರ್ ಕಾರ್ಡ್.

3.   ಬಿ.ಪಿ.ಎಲ್ ಪಡಿತರ ಚೀಟಿ.

4.   ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ವಿಕಲಚೇತನ / ಹಿರಿಯ ನಾಗರೀಕರು / ಮಾಜಿ ಸೈನಿಕ / ಸೈನಿಕರ ವಿಧವೆಯರು / ಸ್ವತಂತ್ರ ಯೋಧರು / ವಿಧುರರು /ಸ್ವತಂತ್ರ ಯೋಧರು ಸಕ್ಷಮ ಪ್ರಾಧಿಕಾರದಿಂದ  ಪಡೆದಂತಹ ಪ್ರಮಾಣ ಪತ್ರವನ್ನು ಹೊಂದಿರಬೇಕು.

5. ಚಾಲ್ತಿಯಲ್ಲಿರುವ ಬ್ಯಾಂಕಿನ ಪಾಸ್ ಪುಸ್ತಕ.

6. ಕಾರ್ಮಿಕರ ಇಲಾಖೆಯಿಂದ ಅಧಿಕೃತ ಗುರುತಿನ ಚೀಟಿ ಅಥವಾ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಕಾರ್ಖಾನೆಯಿಂದ ಧೃಡೀಕರಣ ಪತ್ರ ಹೊಂದಿರಬೇಕು .

7. ವೇತನ ಪ್ರಮಾಣ ಪತ್ರ (ರೂ.3.00 ಲಕ್ಷದೊಳಗಿರಬೇಕು)

 

ಮೇಲೆ ತಿಳಿಸಿದ ಎಲ್ಲಾ ಮೂಲ ದಾಖಲಾತಿಗಳು ಹಾಗೂ ದಾಖಲಾತಿಗಳ ಸಂಖ್ಯೆಗಳನ್ನು ಆನ್ ಲೈನ್ (Online)ನಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಮೂಲ ದಾಖಲೆಯಲ್ಲಿರುವಂತೆ ಮಾಹಿತಿಯನ್ನು ಸ್ಪಷ್ಟವಾಗಿ ಸಲ್ಲಿಸುವುದು.ಅಪೂರ್ಣ ವಿವರ ನೀಡಿದಲ್ಲಿ ಅಥವಾ ತಪ್ಪು ಮಾಹಿತಿಯನ್ನು ನೀಡಿದ್ದಲ್ಲಿ, ಅರ್ಜಿದಾರರಿಗೆ ಯಾವುದೇ ತಿಳುವಳಿಕೆಯನ್ನು ನೀಡದೇ ಅರ್ಜಿಯನ್ನು ತಿರಸ್ಕರಿಸಲಾಗುವುದು.

ತಾಂತ್ರಿಕ ಸಲಹೆಗಾಗಿ: 08182-268544/268545.

ಇತರೆ ಸಲಹೆ ಮಾಹಿತಿಗಾಗಿ: 08182-220799.

 

 

  •     ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ Detailed Notification & Instruction  ಅನ್ನು ಒತ್ತಿರಿ.

  •     ಶಿವಮೊಗ್ಗ ನಗರ ಘೋಷಿತ ಕೊಳಚೆ ಪ್ರದೇಶದ ( Declared Slum List) ನಿವಾಸಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಿರುವುದಿಲ್ಲ.